ಫ್ಯೂಸಲ್ ಎಣ್ಣೆ -
ಮುಖ್ಯತಃ ಅಮೈಲ್ ಆಲ್ಕೊಹಾಲುಗಳನ್ನು ಒಳಗೊಂಡಿರುವ ಮಿಶ್ರಣ. ಈ ಪದವನ್ನು ಸಾಮಾನ್ನವಾಗಿ ಆವಿಶೀಲ ಎಣ್ಣೆಯಂಥ ದ್ರವಗಳ ಮಿಶ್ರಣ ಸೂಚಿಸಲು ಉಪಯೋಗಿಸುತ್ತಾರೆ. ಮದ್ಯಸಾರದ ಹುಳಿಯುವಿಕೆಯಿಂದ ಇದು ಉತ್ಪತ್ತಿಯಾಗುತ್ತದೆ. ಇದನ್ನು ತಯಾರಿಸಲು ಉಪಯೋಗಿಸುವ ಕಚ್ಚಾ ಪದಾರ್ಥಗಳನ್ನೂ ಹುಳಿಯಿಯುವಿಕೆಯ ವಿಧಾನವನ್ನೂ ಅವಲಂಬಿಸಿ ಫ್ಯೂಸಲ್ ಎಣ್ಣೆಯ ರಚನೆ ಮತ್ತು ಸ್ವರೂಪ ಇವೆ. ಸಾವಿರ ಗ್ಯಾಲನ್ ಈಥೈಲ್ ಆಲ್ಕೊಹಾಲಿನಿಂದ ಫ್ಯೂಸಲ್ ಎಣ್ಣೆ ತಯಾರಿಸಬೇಕಾದರೆ ಹುಳಿಯುವಿಕೆಗೆ ಮುಖ್ಯವಾಗಿ ಬೇಕಾಗಿರುವ ಕಚ್ಚಾ ಪದಾರ್ಥಗಳನ್ನು ಮುಂದಿನ ಪ್ರಮಾಣದಲ್ಲಿ (ಗ್ಯಾಲನ್ನುಗಳಲ್ಲಿ) ಉಪಯೋಗಿಸುತ್ತಾರೆ : ಕಾಕಂಬಿ 4__5; ಆವಿಯಾದ ಕಬ್ಬಿನ ರಸ 1_2 ; ಮುಸುಕಿನ ಜೋಳ 4_5 : ಮೊಳಕೆ ಒಡೆಯದಂಥ ಮುಸುಕಿನ ಜೋಳ 2.5_3. ; ಗೋದಿ 2—3. ರೈ 2__4, ಆಲೂಗೆಡ್ಡೆ 5__11, ಸಲ್ಫೈಟ್ ಮದ್ಯ 2—3.

	ಫ್ಯೂಸಲ್ ಎಣ್ಣೆ ಟಿ-ಅಮೈಲ್, ಪಟು ಅಮೈಲ್, ಐಸೊಅಮೈಲ್, ಐಸೊಪ್ರೋಪೈಲ್ ಟಿ-ಫ್ರೋಪೈಲ್, ಟಿ-ಬ್ಯೂಟೈಲ್ ಮತ್ತು ಐಸೊಬ್ಯೂಟೈಲ್ ಆಲ್ಕೊಹಾಲುಗಳ ಮತ್ತು ಬಹಳ ಕಡಿಮೆ ಪ್ರಮಾಣದ ಬೇರೆ ಬೇರೆ ಎಸ್ಟರುಗಳ ಮಿಶ್ರಣ. ಇವುಗಳ ಶೇಕಡಾ ಪ್ರಮಾಣ ಉಪಯೋಗಿಸುವ ಕಚ್ಚಾ ಪದಾರ್ಥಗಳನ್ನು ಅವಲಂಬಿಸಿದೆ. ಅವನ್ನು ಈ ಕೆಳಗಿನ ಪಟ್ಟಿಯಲ್ಲಿ ಕೊಟ್ಟಿದೆ.
ಘಟಕಗಳು
ಮುಸುಕಿನ ಜೋಳ
ಕಾಕಂಬಿ
ಆಲೂಗಡ್ಡೆ
ರೈ

ಐಸೊಪ್ರೋಪೈಲ್ ಆಲ್ಕೊಹಾಲ್
-
0.6
__
__

ಟಿ-ಪ್ರೋಪೈಲ್ ಆಲ್ಕೊಹಾಲ್
20.4-11.7
24.3
6.85
__

ಐಸೊಬ್ಯೂಟೈಲ್ ಆಲ್ಕೊಹಾಲ್
23.9-12.2
7.4
24.35
15.7

ಟಿ-ಬ್ಯೂಟೈಲ್ ಆಲ್ಕೊಹಾಲ್
__
8.1
__
__

ಜ—ಅಮೈಲ್ ಆಲ್ಕೊಹಾಲ್ 
14.6-23.4
55.3
68.76
77.8

ಐಸೊಅಮೈಲ್ ಆಲ್ಕೊಹಾಲ್
36.3-59.7
——
———
——

ಟಿ-ಅಮೈಲ್ ಆಲ್ಕೊಹಾಲ್
—
4.3
—
—

ಇತರ (ಅನಿರ್ಧರಿತ)
4.8—3
_
0.04
6.5

		ಪ್ರರೂಪಿ (ಟಿಪಿಕಲ್) ಫ್ಯೂಸಲ್ ಎಣ್ಣೆಯನ್ನು 60-70% ಅಮೈಲ್ ಆಲ್ಕೊಹಾಲುಗಳು ಮತ್ತು ಇನ್ನುಳಿದ ಭಾಗ ಕೆಳದರ್ಜೆಯ ಆಲ್ಕೊಹಾಲುಗಳು ಇರುತ್ತವೆ. 80-52% ಐಸೊಅಮೈಲ್, 10-15% ಪಟು ಅಮೈಲ್ ಆಲ್ಕೊಹಾಲುಗಳು ಮತ್ತು ಬಹಳ ಕಡಿಮೆ ಪ್ರಮಾಣದಲ್ಲಿ ಟಿ-ಅಮೈಲ್ ಆಲ್ಕೊಹಾಲುಗಳು ಹಂಚಿಕೊಂಡಿರುತ್ತವೆ.

	ಫ್ಯೂಸಲ್ ಎಣ್ಣೆಗೆ ವಿಶಿಷ್ಟ ಗುಣದ ಪರಿಮಳ ಮತ್ತು ಸ್ವಾದ ಇವೆ. ಫ್ಯೂಸಲ್ ಎಣ್ಣೆ ಆಲ್ಕೊಹಾಲನ್ನು ಅಲ್ಪಪರಿಮಾಣದಲ್ಲಿ ಸೇವಿಸಿದಾಗ ಬಾಯಾರಿಕೆ ಮತ್ತು ತಲೆನೋವು ಉಂಟಾದರೆ ಅಧಿಕ ಪರಿಮಾಣದಲ್ಲಿ ಸೇವಿಸಿದಾಗ ಅಂಗೋಪಾಂಗಗಳಲ್ಲಿ ರಭಸವಾದ ಅನಿಯತ ಚಲನೆ ತಲೆದೋರುತ್ತದೆ. ಫ್ಯೂಸಲ್ ಎಣ್ಣೆ ಮತ್ತು ಅದರ ಎಸ್ಟರುಗಳನ್ನು ವಿಶೇಷ ದ್ರಾವಣಗಳಾಗಿಯೂ ಹೊಂಬಣ್ಣದ ಗಚ್ಚಿ ಎಣ್ಣೆ ಮತ್ತು ಸುಲಭವಾಗಿ ಆಕಾರ ಕೊಡಲಾಗಿರುವ ಲೇಪನವಾಗಿಯೂ ಉಪಯೋಗಿಸುತ್ತಾರೆ. ಔಷಧದ ತಯಾರಿಕೆಯಲ್ಲಿಯೂ ಇವುಗಳ ಉಪಯೋಗ ಉಂಟು.
(ಆರ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ